ವೆಬ್ ಧ್ವನಿ

ಉತ್ತಮ ಪ್ರಜಾಕೀಯ ಪಕ್ಷ

ಇದು ಮತದಾರರಾದ ನಮ್ಮ ಪಕ್ಷ

ಉತ್ತಮ ಪ್ರಜಾಕೀಯ ಪಕ್ಷವು

ಮತದಾರರ ಪಕ್ಷವಾಗಿರುವುದರಿಂದ, ಇಲ್ಲಿ:

1

ನಗದುರಹಿತ ಪಕ್ಷ. (ಪಾರ್ಟಿ ಫಂಡ್ ಇಲ್ಲ) ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ.

(ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ.)

2

ಕಾರ್ಯಕರ್ತರು ಇಲ್ಲ.

3

ಪ್ರಾದೇಶಿಕ ಕಛೇರಿಗಳಿಲ್ಲ.

4

ಮೆರವಣಿಗೆ / ರ‍್ಯಾಲಿ / ಬ್ಯಾನರ್‌ಗಳು / ಜನರನ್ನು ಒಟ್ಟುಗೂಡಿಸುವಿಕೆ ಇಲ್ಲ.

5

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮನ್ನು ಕನಿಷ್ಟ ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ.

6

ಯಾರನ್ನೂ ದೂಷಿಸುವುದಿಲ್ಲ

(ದೂಷಿಸುವ ಬದಲು ನಾವು ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ)

7

ಸುಳ್ಳು ಭರವಸೆಗಳಿಲ್ಲ.

8

ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ.

9

ರಾಜಕೀಯ ಲಾಭಕ್ಕಾಗಿ ಮಾಡುವ ಸಮಾಜಸೇವೆ ಇರುವುದಿಲ್ಲ.

ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು,

  1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)…  

    ಅವರು ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ.

  2. ಪ್ರಾಮಾಣಿಕ ಮತದಾರರು (ಪ್ರಜೆಗಳು)…  

    ನಿಜವಾದ ಸಿದ್ಧಾಂತಕ್ಕೆ ಮಾತ್ರ ಮತ ಹಾಕಬೇಕು

ಈ ನನ್ನ ಪಕ್ಷದ ಪ್ರಣಾಳಿಕೆ

ಮತದಾರನಾಗಿರುವ:

1

ನನ್ನ ಅಗತ್ಯತೆಗಳು

2

ನನ್ನ ಬೇಡಿಕೆಗಳು

3

ನಾನು ಬಯಸುವ ಪರಿಹಾರಗಳು

4

ನನ್ನ ಕಲ್ಪನೆಗಳು

ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ.

ನನ್ನ ಪ್ರಣಾಳಿಕೆಗಳನ್ನು ಈಡೇರಿಸಿಕೊಳ್ಳಲು ನಾನು ಚುನಾಯಿಸಿದಂತಹ ಜನಪ್ರತಿನಿಧಿಗಳು / ಪ್ರಜಾ ಕಾರ್ಮಿಕರಾದಂತಹ ನಿಮ್ಮಿಂದ (ಜನ ಪ್ರತಿನಿಧಿಗಳಿಂದ) ಕಲಾತ್ಮಕ ಆಡಳಿತ / ಆರ್ಟ್ ಆಫ್ ಗವರ್ನೆನ್ಸ್ ನಂತೆ ಕೆಲಸವನ್ನು ಪ್ರಜೆಯಾದ ನಾನು ಬಯಸುತ್ತೇನೆ.

A

ಹೊಣೆಗಾರಿಕೆ

R

ಜವಾಬ್ದಾರಿ

T

ಪಾರದರ್ಶಕತೆ

ಇದಕ್ಕಾಗಿ ಪ್ರಜಾಪ್ರತಿನಿಧಿಯು ಈ ಕೆಳಕಂಡ ನಿರ್ಧಿಷ್ಟ ಕಾರ್ಯವೈಖರಿಯ ವಿಧಾನ ವನ್ನು (SOP) ಅನುಸರಿಸಬೇಕು

ಪ್ರಜಾಪ್ರತಿನಿಧಿಯ

ಕಾರ್ಯವೈಖರಿಯ ವಿಧಾನ (ಎಸ್.ಓ.ಪಿ. ವಿಡಿಯೋ ವೀಕ್ಷಿಸಿ)

ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಮತದಾರರೇ ಹೈಕಮಾಂಡ್

ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಸೂಕ್ತ ಅಭ್ಯರ್ಥಿಯ

1

ಆಯ್ಕೆ. - ನನ್ನದೇ ನಿರ್ಧಾರ

2

ಚುನಾವಣೆ. - ನನ್ನದೇ ನಿರ್ಧಾರ

3

ತಿದ್ದುಪಡಿ. - ನನ್ನದೇ ನಿರ್ಧಾರ

4

ತಿರಸ್ಕಾರ. - ನನ್ನದೇ ನಿರ್ಧಾರ

5

ಪುರಸ್ಕಾರ. - ನನ್ನದೇ ನಿರ್ಧಾರ

ಇದಕ್ಕಾಗಿ ಆಕಾಂಕ್ಷಿ / ಅಭ್ಯರ್ಥಿಗಳು ಅನುಸರಿಸಬೇಕಾದ ಸರಳ ಪಾರದರ್ಶಕ ವಿಧಾನ: “ಮತದಾರರ ಶಿಫಾರಸ್ಸು ಪತ್ರ”

ಮತದಾರರ ಶಿಫಾರಸ್ಸು ಪತ್ರ

ಕೆಳಗಿನ ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಅದನ್ನು ಅನುಸರಿಸಿ.

ವಿವಿಧ ಚುನಾವಣೆಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಭಾಗವಹಿಸಲು ಇಚ್ಛಿಸುವ ಆಕಾಂಕ್ಷಿಗಳು ಇಂದೇ ಪಕ್ಷದ ವೆಬ್ಸೈಟ್ ನಿಂದ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್ಲೊಡ್ ಮಾಡಿಕೊಂಡು ಇಂದಿನಿಂದಲೇ ಅದರಲ್ಲಿರುವ ವಿಚಾರಗಳನ್ನು ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ತಿಳಿಸಿ ಅವರ ಒಪ್ಪಿಗೆ ಪಡೆದು ಅವರ ಸಹಿಗಳನ್ನೂ ಸಂಗ್ರಹಿಸಿಕೊಳ್ಳುತ್ತಿರಬೇಕು ಹಾಗೂ ಆಕಾಂಕ್ಷಿಗಳು ಮತದಾರರ ಶಿಫಾರಸ್ಸು ಪತ್ರವನ್ನು ವಿವರಿಸುತ್ತಿರುವ ಮತ್ತು ಸಹಿ ಸಂಗ್ರಹಿಸುತ್ತಿರುವ ಫೋಟೋ/ ವೀಡಿಯೋಗಳನ್ನೂ ರೆಕಾರ್ಡ್ ಮಾಡಿಕೊಂಡು ತಮ್ಮ ಫೇಸ್ಬುಕ್ ಖಾತೆಗಳಲ್ಲಿ ನಿರಂತರವಾಗಿ ಅಪ್ಲೋಡ್/ ಪೋಸ್ಟ್ ಮಾಡಿಕೊಳ್ಳುತ್ತಿರಬೇಕು.(ನಿಮ್ಮ ಫೇಸ್ಬುಕ್ ಖಾತೆಯನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡಿ / ಓಪನ್ ಟು ಪಬ್ಲಿಕ್ ಇರಿಸಿ).

ಉತ್ತಮ ಪ್ರಜಾಕೀಯ ಪಕ್ಷವು ವಿವಿಧ ಚುನಾವಣೆಗಳಿಗೆ ಭಾಗವಹಿಸಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ/ ಕರೆ ನೀಡಿದಾಗ ಪ್ರಜಾಕೀಯದ ಸಿದ್ದಾಂತಗಳಿಗೆ ಬದ್ದರಾಗಿ ನಡೆದುಕೊಳ್ಳುವಂತಹ ಆಸಕ್ತ ಅಭ್ಯರ್ಥಿ ಆಕಾಂಕ್ಷಿಗಳು ಉತ್ತಮ ಪ್ರಜಾಕೀಯ ಪಕ್ಷದ ವೆಬ್ಸೈಟ್ ಗೆ ಲಾಗಿನ್ ಆಗಿ ತಮ್ಮ ಫೇಸ್ಬುಕ್ ಖಾತೆಯನ್ನು (ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟ ಫೇಸ್ಬುಕ್/ ಓಪನ್) ಲಿಂಕ್ ಮಾಡಿಕೊಂಡು ಚುನಾವಣೆಗಳಿಗೆ ಅಭ್ಯರ್ಥಿ ಆಕಾಂಕ್ಷಿಯಾಗಿ ಅರ್ಜಿಯನ್ನು ಸಲ್ಲಿಸಬೇಕು.

Loading PDF…
ಮತದಾರರ ಶಿಫಾರಸ್ಸು ಪತ್ರ - ಡೌನ್ಲೋಡ್ ಮಾಡಿ

ಯುಪಿಪಿ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

ಉತ್ತಮ ಪ್ರಜಾಕೀಯ ಪಕ್ಷದೊಂದಿಗೆ ಸಂಪರ್ಕದಲ್ಲಿರಲು ನಮ್ಮ ಅಧಿಕೃತ ಆಂಡ್ರಾಯ್ಡ್ / ಐಒಎಸ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೆಳಗೆ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ...