ಉತ್ತಮ ಪ್ರಜಾಕೀಯ ಪಕ್ಷ

ಇದು ಮತದಾರರಾದ ನಮ್ಮ ಪಕ್ಷ

ಚುನಾವಣಾ ಅರ್ಜಿ

ಚುನಾವಣೆಗಳಿಗೆ ಅರ್ಜಿ ಸಲ್ಲಿಸುವವರ ಗಮನಕ್ಕೆ:

ವಿವಿಧ ಚುನಾವಣೆಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಭಾಗವಹಿಸಲು ಇಚ್ಛಿಸುವ ಆಕಾಂಕ್ಷಿಗಳು ಇಂದೇ ಪಕ್ಷದ ವೆಬ್ಸೈಟ್ ನಿಂದ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್ಲೊಡ್ ಮಾಡಿಕೊಂಡು ಇಂದಿನಿಂದಲೇ ಅದರಲ್ಲಿರುವ ವಿಚಾರಗಳನ್ನು ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ತಿಳಿಸಿ ಅವರ ಒಪ್ಪಿಗೆ ಪಡೆದು ಅವರ ಸಹಿಗಳನ್ನೂ ಸಂಗ್ರಹಿಸಿಕೊಳ್ಳುತ್ತಿರಬೇಕು ಹಾಗೂ ಆಕಾಂಕ್ಷಿಗಳು ಮತದಾರರ ಶಿಫಾರಸ್ಸು ಪತ್ರವನ್ನು ವಿವರಿಸುತ್ತಿರುವ ಮತ್ತು ಸಹಿ ಸಂಗ್ರಹಿಸುತ್ತಿರುವ ಫೋಟೋ/ ವೀಡಿಯೋಗಳನ್ನೂ ರೆಕಾರ್ಡ್ ಮಾಡಿಕೊಂಡು ತಮ್ಮ ಫೇಸ್ಬುಕ್ ಖಾತೆಗಳಲ್ಲಿ ನಿರಂತರವಾಗಿ ಅಪ್ಲೋಡ್/ ಪೋಸ್ಟ್ ಮಾಡಿಕೊಳ್ಳುತ್ತಿರಬೇಕು.(ನಿಮ್ಮ ಫೇಸ್ಬುಕ್ ಖಾತೆಯನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡಿ / ಓಪನ್ ಟು ಪಬ್ಲಿಕ್ ಇರಿಸಿ)

(ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಆಕಾಂಕ್ಷಿಗಳ ಫೇಸ್ಬುಕ್ ಖಾತೆಯಲ್ಲಿ ಆಕಾಂಕ್ಷಿಗಳು ಮತದಾರರ ಶಿಫಾರಸ್ಸು ಪತ್ರವನ್ನು ವಿವರಿಸುತ್ತಿರುವ ಮತ್ತು ಸಹಿ ಸಂಗ್ರಹಿಸುತ್ತಿರುವ ಫೋಟೋ/ ವೀಡಿಯೋಗಳನ್ನು ಪರೀಕ್ಷಿಸಲಾಗುವುದು.)

ಉತ್ತಮ ಪ್ರಜಾಕೀಯ ಪಕ್ಷವು ವಿವಿಧ ಚುನಾವಣೆಗಳಿಗೆ ಭಾಗವಹಿಸಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ/ ಕರೆ ನೀಡಿದಾಗ ಪ್ರಜಾಕೀಯದ ಸಿದ್ದಾಂತಗಳಿಗೆ ಬದ್ದರಾಗಿ ನಡೆದುಕೊಳ್ಳುವಂತಹ ಆಸಕ್ತ ಅಭ್ಯರ್ಥಿ ಆಕಾಂಕ್ಷಿಗಳು ಉತ್ತಮ ಪ್ರಜಾಕೀಯ ಪಕ್ಷದ ವೆಬ್ಸೈಟ್ ಗೆ ಲಾಗಿನ್ ಆಗಿ ತಮ್ಮ ಫೇಸ್ಬುಕ್ ಖಾತೆಯನ್ನು (ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟ ಫೇಸ್ಬುಕ್/ ಓಪನ್) ಲಿಂಕ್ ಮಾಡಿಕೊಂಡು ಚುನಾವಣೆಗಳಿಗೆ ಅಭ್ಯರ್ಥಿ ಆಕಾಂಕ್ಷಿಯಾಗಿ ಅರ್ಜಿಯನ್ನು ಸಲ್ಲಿಸಬೇಕು.

ಸೂಚನೆ:

  1. ಉತ್ತಮ ಪ್ರಜಾಕೀಯ ಪಕ್ಷವು (UPP) ಸಂಪೂರ್ಣ ವಿಕೇಂದ್ರೀಕೃತ ಪಾರದರ್ಶಕತೆಗಾಗಿ ಈ ಆಯ್ಕೆ ಪ್ರಕ್ರಿಯೆಯನ್ನು ಅನುಸರಿಸುತ್ತಿದೆ. ಮೇಲ್ಕಂಡ ಮಾಹಿತಿಯು ಪ್ರತಿಯೊಬ್ಬ ಆಕಾಂಕ್ಷಿಗಳಿಗೂ ಅರ್ಜಿದಾರರಿಗೂ ಕಡ್ಡಾಯವಾಗಿದ್ದು.. ಇದನ್ನು ಪಾಲಿಸದೇ ಇದ್ದಲ್ಲಿ ತಮ್ಮ ಅರ್ಜಿಗಳು ನೇರವಾಗಿ ತಿರಸ್ಕೃತಗೊಳ್ಳುತ್ತವೆ.
  2. ಆಕಾಂಕ್ಷಿಗಳು ತಮ್ಮ ಕ್ಷೇತ್ರದಲ್ಲಿ ಚುನಾವಣಾ ಆಯೋಗವು ಸೂಚಿಸಿರುವ ಮೀಸಲಾತಿಗಳನ್ನು ಪರಿಶೀಲಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು.
ಮತದಾರರ ಶಿಫಾರಸ್ಸು ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ

ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ

"ಲಾಗಿನ್" ಅನ್ನು ಕ್ಲಿಕ್ ಮಾಡುವ ಮೂಲಕ, ನಮ್ಮ ನಿಯಮಗಳ, ಷರತ್ತುಗಳು ಮತ್ತು ನಮ್ಮ ಗೌಪ್ಯತೆ ನೀತಿಗಳಿಗೆ ಒಪ್ಪಿಗೆಯನ್ನು ನೀವು ಅಂಗೀಕರಿಸುತ್ತೀರಿ.